‘ಲವ್ ಯೂ ರಚ್ಚು’ ಸಿನೆಮಾದ ಸಾಹಸ ಚಿತ್ರೀಕರಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಫೈಟರ್ ವಿವೇಕ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರದ ಭರವಸೆಯನ್ನು ನಿರ್ಮಾಪಕ ಗುರು ದೇಶಪಾಂಡೆ ನೀಡಿದ್ದಾರೆ ಎಂದು ವಿವೇಕ್ ಕುಟುಂಬ ತಿಳಿಸಿದೆ.
ಅಜ್ಞಾತ ಸ್ಥಳದಿಂದಲೇ ದೂರವಾಣಿ ಕರೆ ಮಾಡಿರುವ ನಿರ್ಮಾಪಕ ಗುರು ದೇಶಪಾಂಡೆ ಅವರು, ಮೃತ ವಿವೇಕ್ ಅವರ ಚಿಕ್ಕಪ್ಪ ಗೋಪಿ ಅವರಿಗೆ ಈ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನದ ಹಿಂದೆ ರಾಮನಗರದ ಜೋಗನಪಾಳ್ಯದಲ್ಲಿ ‘ಲವ್ ಯೂ ರಚ್ಚು’ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮೆಟಲ್ ರೋಪ್ ಹೈಟೆನ್ಷನ್ ವೈರ್ ಗೆ ತಗುಲಿದ ಕಾರಣ ಫೈಟರ್ ವಿವೇಕ್ ಸ್ಥಳದಲ್ಲೇ ಮೃತ ಪಟ್ಟಿದ್ದರು. ಈ ವೇಳೆ ಗಾಯಗೊಂಡ ರಂಜಿತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್, ನಿರ್ಮಾಪಕ ಗುರು ದೇಶಪಾಂಡೆ ಅವರ ವಿರುದ್ಧ ರಾಮನಗರ ಪೊಲೀಸರಿಂದ ಎಫ್ ಐ ಆರ್ ದಾಖಲಾಗಿದೆ.
ನಿರ್ದೇಶಕ ಶಂಕರ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನಿರ್ಮಾಪಕ ಗುರು ದೇಶಪಾಂಡೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ.
________________

Be the first to comment