ಆಶಿಕಾ ರಂಗನಾಥ್ ಮತ್ತು ಪ್ರವೀಣ್ ತೇಜ್ ಅಭಿನಯದ ’02’ ಚಿತ್ರದ ಚಿತ್ರೀಕರಣ ಜನವರಿ 22ರಿಂದ ಮತ್ತೆ ಪುನರಾರಂಭವಾಗಲಿದೆ.
ಈ ಚಿತ್ರ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ಅವರ ಚೊಚ್ಚಲ ಚಿತ್ರವಾಗಿದೆ. ಈ ಸಿನಿಮಾವನ್ನು ಅಕ್ಟೋಬರ್ 8 ರಂದು ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಧಿಕೃತವಾಗಿ ಪ್ರಾರಂಭಿಸಿದ್ದರು. ನವೆಂಬರ್‌ನಲ್ಲಿ ಚಿತ್ರೀಕರಣವನ್ನು ಪುನರಾರಂಭಿಸಲು ಚಿತ್ರತಂಡ ಬಯಸಿತ್ತು. ಆದರೆ ಪವರ್‌ಸ್ಟಾರ್ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಶೂಟಿಂಗ್ ತಡವಾಯಿತು.
ಇದು ಪುನೀತ್ ರಾಜ್‌ಕುಮಾರ್ ಅವರ ಹೋಮ್ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್ ನ ಆರನೇ ಸಿನಿಮಾವಾಗಿದೆ. ಚಿತ್ರದಲ್ಲಿ ನಟ-ರೇಡಿಯೋ ಜಾಕಿ ಸಿರಿ ರವಿಕುಮಾರ್, ಯೂಟ್ಯೂಬರ್ ಪುನೀತ್ ಬಿ ಎ, ರಂಗಭೂಮಿ ಕಲಾವಿದ ಮೋಹನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಮಾರ್ಜುನ ಮತ್ತು ಬುದ್ಧಿವಂತ 2 ಚಿತ್ರಗಳಲ್ಲಿ ಕೆಲಸ ಮಾಡಿರುವ ಡಿಒಪಿ ನವೀನ್ ಅವರು O2 ಚಿತ್ರದ ಛಾಯಾಗ್ರಹಣ ಕೆಲಸನಿರ್ವಹಿಸಲಿದ್ದಾರೆ. ಚಿತ್ರ ತಂಡ ಸಂಗೀತ ನಿರ್ದೇಶಕರನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ಕೆಲ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
___






Be the first to comment