ವಿ-ವನ ಯಜ್ಞ ವಿಭಿನ್ನ ಸಿನಿಮಾ!

ವಿ-ವನ ಯಜ್ಞ ವಿಭಿನ್ನ ಸಿನಿಮಾ!

ತುಳು ಚಿತ್ರಗಳನ್ನೇ ಹೆಚ್ಚಾಗಿ ನಿರ್ಮಿಸಿರುವ ಮಂಗಳೂರಿಗರು ಈಗ ಕನ್ನಡ ಚಿತ್ರಗಳನ್ನು ನಿರ್ಮಿಸುವ ಮೂಲಕ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ. ಈಗ ಮಂಗಳೂರಿಗರೆ ನಿರ್ಮಾಣ ಮಾಡಲು ಹೊರಟಿರುವ ಚಿತ್ರದ ಹೆಸರೇ ವಿ-ವನ ಯಜ್ಞ. ಈ ಚಿತ್ರಕ್ಕೆ ಶಿವು ಸರಲೆಬೆಟ್ಟು ಕತೆ, ಚಿತ್ರಕತೆ ಹಾಗೂ ಸಂಭಾಷಣೆಗಳನ್ನು ರಚಿಸಿ ನಿರ್ದೇಶನ ಮಾಡಿದ್ದಾರೆ.ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಶಿವು ಸರಲೆಬೆಟ್ಟ , ಜೀ-ವನವನ್ನು ಜಿಗೆ ಹೋಲಿಸಲಾಗಿದೆ. ಪರ್ಲೆ- ಜಿ ಸಂತೋಷವನ್ನು ಉಂಟು ಮಾಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ.ಈ ಚಿತ್ರದಲ್ಲಿರುವ ಪಾತ್ರಗಳಿಗೆ ಪಂಚಭೂತಗಳಾದ ಭೂಮಿ, ಆಕಾಶ, ಜಲ, ಅಗ್ನಿ ಹಗೂ ವಾಯುಗಳಿಗೆ ಹೋಲಿಸಲಾಗಿದೆ.

ಉಳಿದ 50 ಪಾತ್ರಗಳ ಹೆಸರು ಇರುವುದಿಲ್ಲ. ಕಣ್ಣು, ಕಿವಿ, ಮೆದುಳು, ಮನಸ್ಸು ಜೊತೆಗೆ ಸಮಾಜ ಇರಲಿದ್ದು ಒಂದು ರೀತಿಯಲ್ಲಿ ಪ್ರೇಕ್ಷಕನಿಗೆ ವಿಭಿನ್ನ ಸಿನಿಮಾ ಅನಿಸುತ್ತದೆ. ಸಂತ ಶಿಶುನಾಳ ಶರೀಫ , ಕನಕದಾಸರ ಒಂದೊಂದು ವಾಕ್ಯಗಳನ್ನು ಆರಿಸಿಕೊಂಡು, ಹಾಗೆಯೇ ಹಿರಿಯರು ಹೇಳಿದ ಒಂದೊಂದು ಪದಗಳನ್ನು ಬಳಸಿಕೊಂಡು ಈ ಚಿತ್ರದ ಕತೆಯನ್ನು ಸಿದ್ದಪಡಿಸಲಾಗಿದೆ ಎಂದು ಹೇಳಿದರು.ಮಠ ಕೊಪ್ಪಳ್, ಮನೋಜ್ ಮುತ್ತೂರು, ಶೈನ್‍ಶೆಟ್ಟಿ, ಅನೂಪ್ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ಸೌಜನ್ಯ ಹೆಗ್ಡೆ, ಅನ್ವಿತಾ ಸಾಗರ್, ಆದ್ಯಾ ಆರಾಧನ್, ಮೆರ್ವಿ ಅಭಿನಯಿಸಿದ್ದಾರೆ. ಅಲ್ಲದೆ ಇವರೊಂದಿಗೆ ಹಿರಿಯ ಕಲಾವಿದರಾದ ರಮೇಶ್‍ ಭಟ್ , ಬಿ.ಜಯಶ್ರೀ ಇನ್ನು ಮುಂತಾದವರು ಅಭಿನಯಿಸಿದ್ದಾರೆ. ಮಂಗಳೂರಿನ ಬಹುತೇ ಹೊಸ ಜಾಗಗಳಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ರಿತೀಶ್ ರತ್ನಮಾಲ, ಸಂತು, ಶಿವು ಸರಳೆಬೆಟ್ಟು ಅವರ ಸಾಹಿತ್ಯವಿರುವ ಎಂಟು ಹಾಡುಗಳಿಗೆ ಅಕ್ಷಯ ಮೈಕೆಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.

 

ಈ ಚಿತ್ರದಲ್ಲಿ ವಿಶೇಷವಾಗಿ ಎರಡೂವರೆ ನಿಮಷದ ಗೀತೆಯಲ್ಲಿ ಅರ್ಧ ಗಂಟೆಯ ಕತೆಯನ್ನು ಹೇಳುತ್ತದೆಯಂತೆ. ಕಿರಣ್ ರೈ-ರಂಜನ್‍ಶೆಟ್ಟಿ ಜಂಟಿಯಾಗಿ ಕೆಆರ್‍ಎಸ್ ಕುಡ್ಲ ಕಂಬೈನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಬರುವ ಸಪ್ಟಂಬರ್ ತಿಂಗಳಲ್ಲಿ ತೆರೆಕಾಣಲಿದೆ. ವಿ-ವನ ಎಂಬ ವಿನೂತನ ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿರುವ ಮಂಗಳೂರಿಗರು ಇನ್ನೂ ಸಾಕಷ್ಟು ಕನ್ನಡ ಚಿತ್ರಗಳನ್ನು ನಿರ್ಮಿಸುವಂತಾಗಲಿ.

This Article Has 1 Comment
  1. Pingback: fish spatula yourfishguide.com

Leave a Reply

Your email address will not be published. Required fields are marked *

Translate »
error: Content is protected !!