ವಿನೂತನ ಶೀರ್ಷಿಕೆ ‘ರಣರಣಕ’

ವಿನೂತನ ಶೀರ್ಷಿಕೆ ‘ರಣರಣಕ’

ರಣಕಹಳೆ ಕೇಳಿದ್ದೇವೆ. ‘ರಣರಣಕ’ ಎನ್ನುವ ಚಿತ್ರದ ಶೀರ್ಷಿಕೆಗೆ ಅತಿಯಾದ ಕಾತುರವೆಂದು ನಿಘಂಟುದಲ್ಲಿ ಹೇಳಿದೆ. ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಸುಧಾಕರಬನ್ನಂಜೆ ಪ್ರಕಾರ ಪ್ರೀತಿಸಿದವಳು ಕೈಕೊಟ್ಟಾಗ, ಪ್ರಿಯಕರ ವೇದನೆ ಅನುಭವಿಸುವುದನ್ನು ಇದೇ ಹೆಸರಿನಲ್ಲಿ ಕರೆಯುತ್ತಾರೆಂದು ವ್ಯಾಖ್ಯಾನ ಕೊಡುತ್ತಾರೆ. ಕುತೂಹಲ ಪ್ರೇಮಭರಿತ ಕತೆಯಾಗಿದ್ದು ಹೆಚ್ಚಿನ ವಿವರವನ್ನು ಚಿತ್ರಮಂದಿರದಲ್ಲಿ ನೋಡಬೇಕಂತೆ. ಒಬ್ಬ ಹುಡುಗನ ಬದುಕಿನಲ್ಲಿ ಹುಡುಗಿಯೊಬ್ಬಳು ಪ್ರವೇಶಿಸಿದಾಗ ಆತನ ಜೀವನ ಬದಲಾವಣೆಯಾಗುತ್ತದೆ. ಆಕೆಯ ಸಹಕಾರದಿಂದ ಏನೆಲ್ಲಾ ಮಾಡುತ್ತಾನೆ ಎಂಬುದು ಒಂದು ಏಳೆಯ ತಿರುಳಾಗಿದೆ.

ಬೆಂಗಳೂರು, ಉಡುಪಿ, ಮಂಗಳೂರು, ಉಳ್ಳಾಳ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪಾತ್ರಕ್ಕಾಗಿ 1500 ಹೊಸ ಯುವ ಕಲಾವಿದರನ್ನು ಅಡಿಷನ್ ಮಾಡಲಾಗಿ ಇದರಲ್ಲಿ ಮಂಡ್ಯಾದ ಶಶಿಕಾಂತ್, ತುಮಕೂರಿನ ದಿವ್ಯಾ ನಾಯಕ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರು ಚಿತ್ರರಂಗಕ್ಕೆ ಇವರನ್ನು ಶಶಿರಾಜ್, ಸಂಭ್ರಮಗೌಡ ಹೆಸರಿನಲ್ಲಿ ಪರಿಚಯಿಸಿದ್ದು, ಕಾಲೇಜು ಹುಡುಗನಾಗಿ ಮತ್ತು ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಟೆನ್ನಿಸ್‍ಕೃಷ್ಣ, ಶೋಭರಾಜ್, ಹೊನ್ನವಳ್ಳಿಕೃಷ್ಣ, ಬಿರಾದಾರ್, ಮೈಕೋಮಂಜು, ಶೇಖರ್‍ಭಂಡಾರಿ ಮುಂತಾದವರು ನಟಿಸಿದ್ದಾರೆ. ರಾಜೇಶ್‍ರಾಮನಾಥ್ ಸಂಗೀತ ಸಂಯೋಜನೆಯಲ್ಲಿ ಹೇಮಂತ್, ಅನುರಾಧಭಟ್, ಅಜಯ್‍ವಾರಿಯರ್ ಹಾಡುಗಳಿಗೆ ಕಂಠದಾನ ಮಾಡಿದ್ದಾರೆ. ನಿರ್ದೇಶಕರ ವಿಧೇಯಶಿಷ್ಯ ಎನ್.ದಿವಾಕರ ಗುರುಗಳಿಗೆ ಕಾಣಿಕೆ ಕೊಡಬೇಕೆಂದು ಕತೆ,ಸಾಹಿತ್ಯ, ಒಂದು ಗೀತೆ ಹಾಡಿರುವ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ನಿರ್ಮಾಪಕರ ವಾಸಸ್ಥಳ ಲಗ್ಗೇರೆಯಲ್ಲಿ ಜಯನಗರ ಶಾಸಕಿ ಸೌಮ್ಯರೆಡ್ಡಿ, ಟೆನ್ನಿಸ್‍ಕೃಷ್ಣ, ಹೊನ್ನವಳ್ಳಿಕೃಷ್ಣ, ಬಿರಾದಾರ್, ವಿತರಕ ವೆಂಕಟ್‍ಗೌಡ ಇತರೆ ಗಣ್ಯರು ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ಸದ್ಯ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಸೆಪ್ಟಂಬರ್‍ದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ.

 

 

 

This Article Has 2 Comments
  1. Pingback: software testing platforms

  2. Pingback: pencairan sertifikasi

Leave a Reply

Your email address will not be published. Required fields are marked *

Translate »
error: Content is protected !!