ಲಹರಿ ಸಂಸ್ಥೆಗೆ 5 ಮಿಲಿಯನ್ ಚಂದಾದಾರರು

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಭದ್ರನೆಲೆಯನ್ನು ಕಂಡುಕೊಂಡು ಪ್ರಖ್ಯಾತಿ ಹೊಂದಿರುವ ಲಹರಿ ಸಂಸ್ಥೆ ಈಗ ದಾಖಲೆಯ ಸ್ಥಾನದಲ್ಲಿ ನಿಂತಿದೆ ಎಂದೇ ಹೇಳಬಹುದು.

1960 ರಲ್ಲಿ ಮಣ್ಣಿನ ತಟ್ಟೆ ಆಕಾರದಲ್ಲಿ ಹಾಡುಗಳನ್ನು ಕೇಳುವ ಅವಕಾಶ ಸಿಗುತ್ತಿತ್ತು, ತದ ನಂತರ 70ರಲ್ಲಿ ವಿನಿಲ್ ಮಾದರಿಯಲ್ಲಿ ಬಂದು ನಂತರ 80ರಲ್ಲಿ ಕ್ಯಾಸೆಟ್ ರೂಪವನ್ನು ಪಡೆದುಕೊಂಡು ಕೇಳುಗರ ಮನಸ್ಸನ್ನು ಸಂತೋಷ ಪಡಿಸುವುದರ ಜೊತೆಗೆ ಕಾಂಬಿನೇಷನ್ ಹಾಡುಗಳು ಕೂಡ ಹೊರಬಂದವು.ಹೀಗೆ ಯಶಸ್ಸಿನ ಹಾದಿಯತ್ತ ಇರುವಾಗಲೇ ಲಹರಿ ಕಂಪನಿಯ ಮೂಲಕ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಹೊರಬಂದವು. ತದನಂತರ 90ರ ದಶಕದಲ್ಲಿ ಸಿಡಿ ಹಾಗೂ ಎಂಪಿ3 ಫಾರ್ಮೆಟ್ ಕೂಡ ಕೇಳುಗರ ಗಮನ ಸೆಳೆಯಿತು.

ತಾಂತ್ರಿಕವಾಗಿ ಬೆಳೆಯುತ್ತ ಮುಂದೆ ಸಾಗಿದ ಸಂಗೀತ ಕ್ಷೇತ್ರ 2000ರ ಅಸುಪಾಸಿನಲ್ಲಿ ಪೆನ್‍ಡ್ರೈವ್ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿತು. ಈಗ 2015ರ ಡಿಜಿಟಲ್ ಯುಗ ತನ್ನದೇ ಆದ ಹಿಡಿತವನ್ನು ಸಾಧಿಸಿ ಈಗ ಹೊಸ ಆಯಾಮಕ್ಕೆ ನಾಂದಿ ಹಾಡಿತು.ಡಿಜಿಟಲ್ ಯುಗ ಎಂದೇ ಕರೆಸಿಕೊಳ್ಳುವ ಈ ಕಾಲಘಟ್ಟದಲ್ಲಿ ಕುಂತಲ್ಲೇ ನಾನಾ ಬಗೆಯ ಸಂಗೀತದ ಸುಧೆಯನ್ನು ಕರ್ಣದ ಮೂಲಕ ಕೇಳುಗ ಸೌಭಾಗ್ಯ ದೊರಕಿದಂತಾಗಿದೆ. ಇತ್ತೀಚೆಗೆ ಬಂದಂತಹ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಭಾರೀ ಸದ್ದನ್ನು ಮಾಡುವುದರ ಜೊತೆಗೆ ಸಂಗೀತ ಕ್ಷೇತ್ರದಲ್ಲೂ ದೊಡ್ಡ ಅಲೆಯನ್ನೇ ಎಬ್ಬಿಸಿತು.

ತದ ನಂತರ ಬಂದಂತಹ ಹಲವಾರು ಚಿತ್ರಗಳು ಕೂಡ ಸಂಗೀತದ ಕ್ರಾಂತಿಯನ್ನೇ ಮಾಡಿತು ಎಂದು ಹೇಳಬಹುದು. ಲಹರಿ ಸಂಸ್ಥೆ ತನ್ನದೇ ಆದ ಮಾನದಂಡದೊಂದಿಗೆ ಮುನ್ನುಗ್ಗುತ್ತಿದ್ದು ಅಂದಿನಿಂದ ಇಂದಿನವರೆಗೆ ಲೆಕ್ಕವಿಲ್ಲದ ಅದೆಷ್ಟೋ ಗೀತೆಗಳು ತನ್ನ ಮಡಿಲಿನಲ್ಲಿ ಇಟ್ಟುಕೊಂಡಿದೆ.ಇಂದಿಗೆ ಸರಿಸುಮಾರು 5 ಮಿಲಿಯನ್ (50 ಲಕ್ಷ) ಚಂದಾದಾರರನ್ನು ಹೊಂದಿರುವ ದಕ್ಷಿಣ ಭಾರತದ ಏಕೈಕ ಸಂಸ್ಥೆಯಾಗಿ ಲಹರಿ ಆಡಿಯೋ ಕಂಪೆನಿ ಗುರುತಿಸಿಕೊಂಡಿದೆ. ಅದುವೇ ಸಿನಿಮಾ ಹಾಡುಗಳಿಂದ ದೊರೆತ ಯಶಸ್ಸಾಗಿದೆ.

ಈ ಸಂಸ್ಥೆಯನ್ನು ಹುಟ್ಟುಹಾಕಿದಂತಹ ಮನೋಹರ್ ನಾಯ್ಡು ಹಾಗೂ ತುಳ ಸೀರಾಮ್‍ನಾಯ್ಡು (ವೇಲು) ಸೇರಿದಂತೆ ಅವರ ಕುಟುಂಬ ವರ್ಗ ಮತ್ತು ಕಾರ್ಮಿಕರ ಶ್ರಮದಿಂದ ಈ ಮಟ್ಟಕ್ಕೆ ತಲುಪಿದೆ.ಈ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಡಾ.ಭೀಮಸೇನ್‍ಜೋಷಿ, ಡಾ.ರಾಜ್‍ಕುಮಾರ್, ಇಳಯರಾಜ ಮುಂತಾದವರು ಮುಟ್ಟಿರುವ ಗಂಧದ ಪೆಟ್ಟಿಗೆಯನ್ನು ಸುರಕ್ಷಿತವಾಗಿ ಇಡಲಾಗಿದೆ.ಮುಂದೆ ಒಂದು ಕೋಟಿ ಚಂದದಾರರು ಆದ ನಂತರ ಗಂಧದ ಪೆಟ್ಟಿಗೆಗೆ ಚಿನ್ನದ ಕೋಟ್ ಅನ್ನು ಮಾಡಿಸುವ ಆಲೋಚನೆಯನ್ನು ಹೊಂದಿದ್ದಾರಂತೆ. ಬಹಳಷ್ಟು ಚಿತ್ರದ ಹಾಡುಗಳು ಆ ಒಂದು ಗಂಧದ ಪೆಟ್ಟಿಗೆಯಿಂದ ಹೊರಬಂದ ಕಾರಣ ಅದನ್ನು ಸುರಕ್ಷಿತವಾಗಿಟ್ಟಿ್ದು ಮುಂದೊಂದು ದಿನ ಅದನ್ನು ಹೊರ ತರುವ ಆಲೋಚನೆಯೂ ಅವರಲ್ಲಿದೆಯಂತೆ. ಅವರ ಆಸೆಯಂತೆ ಒಂದು ಕೋಟಿಯ ಚಂದಾದಾರರು ಲ

This Article Has 2 Comments
  1. Pingback: latest automation tools in software testing

  2. Pingback: Energy Paragon Ellicott City

Leave a Reply

Your email address will not be published. Required fields are marked *

Translate »
error: Content is protected !!