ಮಾಜಿ ವಿಶ್ವ ಸುಂದರಿ, ಕನ್ನಡತಿ ಐಶ್ವರ್ಯಾ ರೈ ಅವರಿಗೆ ಇಂದು 45ನೇ ಜನ್ಮ ದಿನದ ಸಂಭ್ರಮಾಚರಣೆ.
45 ವರ್ಷವಾದರೂ ಇನ್ನೂ ಇಪ್ಪತ್ತರ ಚೆಲುವೆಯಂತೆ ಯುವತಿಯರಿಗೆ ಸ್ಫೂರ್ತಿಯಾಗಿರುವ ಐಶ್ವರ್ಯಾ ತಮ್ಮ ಹುಟ್ಟು ಹಬ್ಬವನ್ನು ಕುಟುಂಬದವರು ಮತ್ತು ಕೆಲ ಸ್ನೇಹಿತರೊಂದಿಗೆ ಆಚರಿಸಿದ್ದು, ಇನ್ಸ್ಟಾಗ್ರಾಂನಲ್ಲಿ ಕೆಲ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.ತಾಯಿ ಬೃಂದ್ಯಾ ರೈ, ಪತಿ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಆರಾಧ್ಯಾ ಜತೆ ಫೋಟೋಗೆ ಪೋಸ್ ನೀಡಿರುವ ಐಶ್, ಶ್ವೇತವರ್ಣದ ಬಟ್ಟೆ ಧರಿಸಿ ವಿಶ್ವ ಸುಂದರಿಯಂತೆಯೇ ಮಿಂಚಿದ್ದಾರೆ.ಐಶ್ವರ್ಯಾಗೆ ಪತಿ ಅಭಿಷೇಕ್ ಬಚ್ಚನ್ ಕೂಡ ಇನ್ಸ್ಟಾಗ್ರಾಂನಲ್ಲಿ ಶುಭಾಷಯ ಕೋರಿದ್ದು, “ಹ್ಯಾಪಿ ಬರ್ತ್ಡೇ ವೈಫ್… ಐ ಲವ್ ಯೂ. ನನ್ನ ಖುಷಿಯಾದ ಜಾಗ” ಎಂದು ಬರೆದು ಐಶ್ವರ್ಯಾ ಜತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.
Be the first to comment