ಭಾವನಾಂತರಂಗದ ಭಾವ ತರಂಗ

ಭಾವನ ಮದುವೆಯ ನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ! ಅವರ ಸಿನಿಮಾದ ಜರ್ನಿ ಹೆಗಿದೆ…? ನೀವು ಓದಿ ..ಸಂದರ್ಶನ ಬಿಸಿನಿಮಾಸ್ ನಲ್ಲಿ ಮಾತ್ರ

ಪುನೀತ್ ಜೊತೆಗೆ ಈಗಾಗಲೇ ನಟಿಸಿದ್ದೀರಿ. ಪ್ರಸ್ತುತ ಅವರ ಸಹೋದರ ಶಿವರಾಜಕುಮಾರ್ ಚಿತ್ರದಲ್ಲಿ ನಾಯಕಿಯಾಗಿದ್ದೀರಿ. ಇಬ್ಬರು ಹೇಗೆ ವಿಭಿನ್ನವೆನಿಸುತ್ತಾರೆ?
ಇಬ್ಬರೂ ಕೂಡ ಬಹಳ ಫ್ರೆಂಡ್ಲಿ, ಡೌನ್ ಟು ಅರ್ಥ್. ಸ್ಟಾರ್ ನಟರೆಂಬ ಪ್ರಭಾವಳಿಗಳನ್ನು ತೋರಿಸದ ವ್ಯಕ್ತಿತ್ವ ಇವರದು. ರಾಜಕುಮಾರ್ ಸರ್‍ರಂಥ ದೊಡ್ಡ ಫ್ಯಾಮಿಲಿಯಿಂದ ಬಂದಿದ್ದರೂ, ಇವರಲ್ಲಿ ಯಾವುದೇ ಅಹಂಭಾವಗಳನ್ನು ಕಂಡಿಲ್ಲ. ವೃತ್ತಿಯೆಡೆಗಿನ ಅವರ ಅರ್ಪಣಾಭಾವವನ್ನು ಕಂಡು ಅಚ್ಚರಿ, ಖುಷಿ ಪಟ್ಟಿದ್ದೇನೆ.

ನಿರ್ದೇಶಕರಾಗಿರುವ ನಿಮ್ಮ ಸಹೋದರನ ಬಗ್ಗೆ ಹೇಳಿ
ನನ್ನ ಅಣ್ಣನ ಹೆಸರು ಜಯದೇವ್. ಈಗಾಗಲೇ ‘ಪಟ್ಟಿನ ಪಾಕಂ’ ಎಂಬ ಒಂದು ತಮಿಳು ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದರ ಚಿತ್ರೀಕರಣ ಪೂರ್ತಿಯಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಸುದೀಪ್‍ರೊಂದಿಗೆ ಎರಡು ಚಿತ್ರಗಳಲ್ಲಿ ನಟಿಸಿದ್ದಿರಲ್ಲ?
ಸುದೀಪ್ ಜೊತೆಗೆ ಎರಡು ಚಿತ್ರಗಳಲ್ಲಿ ನಟಿಸಿದ್ದೇನೆ. ಒಂದರಲ್ಲಿ ನಾಯಕಿಯಾಗಿ ಮತ್ತು ಇನ್ನೊಂದು ಚಿತ್ರದಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಸುದೀಪ್ ಕೂಡ ನಾನು ಮೆಚ್ಚುವ ನಟರಲ್ಲಿ ಒಬ್ಬರು.

ಕನ್ನಡಿಗ ನಿರ್ಮಾಪಕರೊಂದಿಗೆ ನಿಮ್ಮ ನಿಶ್ಚಿತಾರ್ಥ ನಡೆದಿರುವ ಬಗ್ಗೆ?
ಅವರ ಹೆಸರು ನವೀನ್ ಎಂದು. ಅವರಿಗೆ ಕನ್ನಡ ಗೊತ್ತು. ನವೀನ್ ನಿರ್ಮಿಸಿರುವುದು ಕನ್ನಡ ಚಿತ್ರಗಳನ್ನು. ಆದರೆ ಅವರು ತೆಲುಗಿನವರು. ರೋಮಿಯೋ ಎಂಬ ಗಣೇಶ್ ಚಿತ್ರದ ಸೆಟ್‍ನಲ್ಲಿಯೇ ನಿರ್ಮಾಪಕರಾದ ನವೀನ್ ಪರಿಚಯವಾಗಿದ್ದರು. ಪರಿಚಯ ಈಗ ಮದುವೆಯ ಹಂತಕ್ಕೆ ಬಂದಿದೆ.

ಪ್ರಸ್ತುತ ನೀವು ತೊಡಗಿಸಿಕೊಂಡಿರುವ ಚಿತ್ರಗಳು ಯಾವುವು?
ಮಲಯಾಳಂನಲ್ಲಿ ಪೃಥ್ವಿರಾಜ್‍ಗೆ ಜೋಡಿಯಾಗಿರುವ ಆ್ಯಡಂ ಜ್ಯೂವ ಎಂಬ ಸಿನಿಮಾದ ಚಿತ್ರೀಕರಣ ಪೂರ್ತಿಗೊಳಿಸಿದ್ದೇನೆ. ಸದ್ಯಕ್ಕೆ ಟಗರು ಎಂಬ ಈ ಕನ್ನಡ ಚಿತ್ರದಲ್ಲಷ್ಟೇ ನಾನು ಕಮಿಟ್ ಆಗಿದ್ದೇನೆ.

ಪ್ರಪಂಚ ಪರ್ಯಟನೆಯ ಕನಸಿರುವ ನಿಮಗೆ ಇಷ್ಟವಾಗುವ ವಿದೇಶ ಯಾವುದು?
ಸಾಮಾನ್ಯವಾಗಿ ನಾನು ಎಲ್ಲೇ ಹೋದರೂ ಅಲ್ಲಿ ಕೇರಳದವರು ಸಿಗುತ್ತಾರೆ. ಹಾಗಾಗಿ ನನಗೆ ಎಲ್ಲ ದೇಶಗಳೂ ಒಂದೇ ಅನಿಸುತ್ತವೆ. ಉಳಿದಂತೆ ದುಬೈ ಒಂದಷ್ಟು ಆಪ್ತವಾಗುತ್ತದೆ. ನಮ್ಮ ದೇಶದಿಂದ ಮೂರುವರೆ ಗಂಟೆಗಳ ಪ್ರಯಾಣ ಮಾತ್ರ ಇದೆ. ಶಾಪಿಂಗ್‍ಗೂ ಇಷ್ಟ. ಯುಎಸ್ ಕೂಡ ಇಷ್ಟ.

ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿನ ನಟನೆ ಹೇಗೆ ಭಿನ್ನವೆನಿಸುತ್ತದೆ?
ನನ್ನ ನಟನೆಯ ವಿಚಾರಕ್ಕೆ ಬಂದರೆ ನನಗೆ ಭಾರೀ ಬದಲಾವಣೆ ಮಾಡಬೇಕಾಗಿ ಬಂದಿಲ್ಲ. ತಮಿಳು, ತೆಲುಗು ಮತ್ತು ಈಗ ಕನ್ನಡ ಹೀಗೆ ಭಾಷೆಗಳು ಕೂಡ ನನಗೆ ದೊಡ್ಡ ಮಟ್ಟದ ತೊಂದರೆಯೆನಿಸಿಲ್ಲ. ಸಾಮಾನ್ಯವಾಗಿ ನನಗೆ ಇಂಗ್ಲಿಷ್ ಲೆಟರ್ಸ್‍ನಲ್ಲಿ ಡೈಲಾಗ್ಸ್ ಬರೆದು ಕೊಡುತ್ತಾರೆ. ಅದರ ಅರ್ಥ ಕೇಳಿಕೊಂಡು ಬಾಯಿಪಾಠ ಮಾಡಿ ಹೇಳುತ್ತೇನೆ.

This Article Has 3 Comments
  1. Pingback: Digital transformation

  2. Pingback: CI CD

  3. Pingback: sexual orientation in the united states military a history

Leave a Reply

Your email address will not be published. Required fields are marked *

Translate »
error: Content is protected !!