ಅನಿವಾಸಿ ಕನ್ನಡಿಗರು ಸೇರಿಕೊಂಡು ನಿರ್ಮಾಣ ಮಾಡಿರುವ ‘ರತ್ನಮಂಜರಿ’ ಚಿತ್ರದಲ್ಲಿ ಹಲವು ವಿಶೇಷತೆಗಳು ತುಂಬಿರುವುದರಿಂದ ಸಿನಿಮಾ ನೋಡಲು ಜನರು ಕಾತುರರಾಗಿದ್ದಾರೆ. ಅಮೇರಿಕಾದಲ್ಲ್ಲಿ ನಡೆದ ಸತ್ಯಘಟನೆ ಆಧಾರಿತ ಕತೆಯಾಗಿದೆ. ಜೊತೆಗೆ ಕೊಡವ ಸಂಸ್ಕ್ರತಿಯನ್ನು ತೋರಿಸಲಾಗಿದೆ. ಪ್ರಾರಂಭ ಮತ್ತು ಅಂತ್ಯ ಕೊಡಗು ಸ್ಥಳದಲ್ಲಿ ಇರಲಿದೆ. ಡಾ.ರಾಜ್ಕುಮಾರ್. ಅಂಬರೀಷ್, ಅನಂತ್ನಾಗ್ ಚಾಲನೆ ಮಾಡಿರುವ ಜೀಪ್ವೊಂದು ಪಾತ್ರವಹಿಸಿದೆ. ಮೂವರು ನಾಯಕಿಯರು ಇರಲಿದ್ದು ಇದರಲ್ಲಿ ಯಾರು ಶೀರ್ಷಿಕೆಯಾಗಿದ್ದಾರೆಂದು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ. ಮಡೆಕೇರಿ, ಅಮೇರಿಕಾ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹರ್ಷವರ್ಧನ್ರಾಜ್ ಸಂಗೀತ, ಕೆ.ಕಲ್ಯಾಣ್ ಸಾಹಿತ್ಯದಲ್ಲಿ ಟಿಪ್ಪು ಮತ್ತು ಅಪ್ಪು ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ನಗುವ ರಾಣಿಯಂತೆ ಅಖಿಲಾಪ್ರಕಾಶ್, ಕಣ್ಣುಗಳಲ್ಲೆ ಭಾವನೆಗಳನ್ನು ತೋರಿಸುವುದು. ಮಡಕೇರಿಯಲ್ಲಿ ಬರುವ ದೇಸಿ ಹಾಡಿಗೆ ಹೆಜ್ಜೆ ಹಾಕಿರುವ ಮನೆಕೆಲಸದ ಪಾತ್ರದಲ್ಲಿ ಪಲ್ಲವಿರಾಜು ಮತ್ತು ಸಿಲ್ಕ್ಸ್ಮಿತರಂತೆ ಕಾಣುವ ಶ್ರದ್ದಾಸಾಲಿಯನ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಯುಎಸ್ದಿಂದ ಕರ್ನಾಟಕಕ್ಕೆ ಯಾವ ಕಾರಣಕ್ಕೆ ಬರುತ್ತಾನೆ. ಫೋಟೋ ನೋಡಿ ನೆನಪುಗಳನ್ನು ಕಣ್ಣ ಮುಂದೆ ತರಿಸಿಕೊಳ್ಳುವ ನಾಯಕ ರಾಜ್ಚರಣ್ ಎನ್ಆರ್ಐ ಕನ್ನಡಿಗನಾಗಿ ಬಣ್ಣ ಹಚ್ಚಿದ್ದಾರೆ. ಕತೆ ಬರೆದು ನಿರ್ದೇಶನ ಮಾಡಿರುವ ಪ್ರಸಿದ್ದ್ ನಂಬಿಕೆ ಮೇಲೆ ಸಂದೀಪ್ಕುಮಾರ್ ಮತ್ತು ನಟರಾಜಹಳೇಬೀಡು ನಿರ್ಮಾಣ ಮಾಡಿರುವುದು ಹೊಸ ಅನುಭವ. ಸೆನ್ಸಾರ್ನವರು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ, ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸದೆ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಬಿಡುಗಡೆ ಮುಂಚೆ ರಂಗತರಂಗದಂತೆ ಇರಲಿದೆ ಎಂದು ಸುದ್ದಿಯಾಗಿರುವುದರಿಂದ ವಿತರಕ ದೀಪಕ್ಗಂಗಾಧರ್ ಖುಷಿಯಾಗಿ ಒಳ್ಳೆ ಕೇಂದ್ರಗಳಲ್ಲಿ ಇದೇ ಶುಕ್ರವಾರದಂದು ತೆರೆ ಕಾಣಿಸಲು ಯೋಜನೆ ಹಾಕಿಕೊಂಡಿದ್ದಾರೆ.
Pingback: CI CI services