ಪುಟ್ಟರಾಜು ಧ್ವನಿಸುರುಳಿ ಬಿಡುಗಡೆ. ಪುಟ್ಟರಾಜು ಲವರ್ ಆಫ್ ಶಶಿಕಲಾ ಎಂದು ಅಡಿಬರಹದೂಂದಿಗೆ ಸಿದ್ಧವಾಗಿರುವ ಚಿತ್ರ, 2001 ರಂದು ತುಮಕೂರು ಸುತ್ತಮುತ್ತ ನಡೆದ ಘಟನೆಯನ್ನು ಬಳಸಲಾಗಿದ್ದು , ಪ್ರೌಡಶಾಲೆಯಲ್ಲಿ ಓದುವ ಹುಡುಗ-ಹುಡುಗಿಯ ಕತಯಲ್ಲಿ ಅರ್ಧದಷ್ಟು ಸನ್ನಿವೇಶಗಳು ಕೊಕ್ಕೋ ಆಟ ಬರಲಿದೆಯಂತೆ.
ಈ ಚಿತ್ರದಲ್ಲಿ ಪುಟ್ಟರಾಜು ಗೆ ಇಬ್ಬರು ಶಶಿಕಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಶಶಿಕಲಾ ರಾಜ್ಯದ ಕೊಕ್ಕೋ ಛಾಂಪಿಯನ್. ಆಕೆಯನ್ನು ಪಟಾಯಿಸಲು ಅವನು ಅದೇ ಆಟಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿ ಸರಿಯಾಗಿ ಆಡದೆ ಇರುವುದರಿಂದ ಹೊರ ಬರಬೇಕಾಗುತ್ತದೆ.
ಇದರ ಮಧ್ಯೆ ನಾಯಕಿಯ ಅಜ್ಜಿ, ನಾಯಕನ ತಾತ ಪ್ರವೇಶವಾಗಿ ಇಬ್ಬರಲ್ಲೂ ಕ್ರಶ್ ಆಗುತ್ತದೆ. ಮುಂದೇನು ಎನ್ನುವುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ. ಪ್ರೀತಿಗೆ ವಯಸ್ಸು ಬೇಕಾಗಿಲ್ಲ. ಮನಸ್ಸುಗಳು ಒಂದಾದರೆ ಸಾಕು ಎಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಸಹದೇವ ಮಾಹಿತಿ ಬಿಚ್ದಿಟ್ಟರು.
ಹದಿಹರೆಯದ ವಯಸ್ಸಿನಲ್ಲಿ ಏನೇನು ಆಗುತ್ತದೆ ಎನ್ನುವ ಪಾತ್ರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಯಾಗಿ ಚಿಕ್ಕಮಗಳೂರಿನ ಅಮಿತ್ ನಾಯಕನಾಗಿ ಅಭಿನಯಿಸಿದ್ದಾರೆ. ಮೈಸೂರಿನ ಹುಡುಗಿ ಇಂಜನಿಯರಿಂಗ್ ಓದುತ್ತಿರುವ ಸುಶ್ಮಿತಾ ಸಿದ್ದಪ್ಪ ನಾಯಕಿಯಾಗಿದ್ದಾರೆ. ಮಾರಿಮುತ್ತು ಪಾತ್ರದಿಂದ ಹೆಸರು ಮಾಡಿದ್ದ ಸರೋಜಮ್ಮ ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಗೆಳಯರಾಗಿ ವಿಕ್ರಾಂತ್, ಕಾವ್ಯ, ತಾತನಾಗಿ ರಂಗಭೂಮಿ ನಟ ಮಹದೇವಮೂರ್ತಿ, ವೃತ್ತಿಯಲ್ಲಿ ವೈದ್ಯೆ ಪ್ರವೃತ್ತಿ ಕಲಾವಿದೆಯಾಗಿರುವ ಡಾ.ರಮಾಮಣಿ ನಾಯಕಿ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಬರೆದಿರುವ ಮೂರು ಹಾಡುಗಳಿಗೆ ಶ್ರೀಮಾನ್ ಗಂಧರ್ವ ಸಂಗೀತವಿದೆ. ನಿರ್ದೇಶಕರ ಮಾವ ನಾಗರಾಜು.ಹೆಚ್.ವಿ , ಬಾಮೈದ ರಾಜುಬಾಲಕೃಷ್ಣ ಜಂಟಿಯಾಗಿ ಹಣ ಹೊಡಿರುವ ಸಿನಿಮಾದ ಸಿ.ಡಿ ಬಿಡುಗಡೆ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಕೋರಿದರು. ಚಿತ್ರ ಅತಿ ಶೀಘ್ರದಲ್ಲಿ ಬೆಳ್ಳಿಪರದೆ ಮೇಲೆ ರಾರಾಜಿಸಲಿದೆಯಂತೆ.
Pingback: DevOps