ನಿರ್ಮಾಪಕ ಎಸ್.ಬಿ.ಶಿವು’ಥಿಯರಿ’ ಚಿತ್ರ
ಮೈಸೂರಿನ ಟೆಕ್ಕಿಗಳ ತಂಡವೊಂದು ವ್ಯಾಸಾಂಗ ಮಾಡುವಾಗಲೇ ‘ಥಿಯರಿ’ ಎನ್ನುವ ಚಿತ್ರಕ್ಕೆ ಕತೆಯನ್ನು ಸಿದ್ದಪಡಿಸಿದ್ದರು. ಇವರ ಪ್ರತಿಭೆಯನ್ನು ಗುರುತಿಸಿದ ತರ‍್ಲೆ ವಿಲೇಜ್ ನಿರ್ಮಾಪಕ ಎಸ್.ಬಿ.ಶಿವು ಸಿನಿಮಾಕ್ಕೆ ಹಣ ಹೂಡಿದ್ದಾರೆ. ವರ್ತಮಾನದಲ್ಲಿ ನೈಜ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆ ಬರಯಲಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಕೊಲೆ, ಔಷದಿ ದಂದೆ, ದುಡ್ಡು, ಕಾನೂನುಬಾಹಿರ ಚಟುವಟಿಕೆಗಳು ಇವೆಲ್ಲವುಗಳನ್ನು ದೃಶ್ಯಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ. ಯುವಪೀಳಿಗೆಯು ದುಡ್ಡಿನ ಆಸೆಗಾಗಿ ಏನೆಲ್ಲಾ ಮಾಡುತ್ತಾರೆ. ಔಷದಿ ದಂದೆಯು ಯಾವ ಪರಿಸ್ಥಿತಿಗೆ ಬಂದಿದೆ. ಇದಕ್ಕೆ ಕಡಿವಾಣ ಮಾಡಲು ಸರ್ಕಾರದಿಂದ ಮಾತ್ರ ಸಾದ್ಯವೆಂದು ಹೇಳಿದ್ದಾರೆ. ಮನುಷ್ಯನ ಆಯಾ ದೃಷ್ಟಿಕೋನದಲ್ಲಿ ಇವೆಲ್ಲವು ಪ್ರಾಕ್ಟಿಕಲ್ ಆಗಿದ್ದು, ಚಿತ್ರದಲ್ಲಿ ಥಿಯರಿ ಮೂಲಕ ತೋರಿಸಿದ್ದಾರಂತೆ.
ಮೈಸೂರು, ಕೆ.ಆರ್.ನಗರ, ಮಂಡ್ಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಲ್ಲ ಪಾತ್ರಗಳು ಮುಖ್ಯವಾಗಿರುವುದರಿಂದ ನಾಯಕ, ನಾಯಕಿ ಎನ್ನುವ ಪರಿಕಲ್ಪನೆ ಇರುವುದಿಲ್ಲ. ತಾರಗಣದಲ್ಲಿ ಯದುಶ್ರೇಷ್ಟ, ತೇಜಸ್ವಿನಿಮುಂಡಾಸಾದ್, ದೀಪಕ್‌ಗೌಡ, ಸಂತೋಷ್‌ಪ್ರಭು, ಜಯನ್, ಆತ್ಮಾನಂದವಾಸನ್,ನಾಗಾರ್ಜುನ್‌ಆರಾಧ್ಯ, ಡಾ.ಚಿದಾನಂದಸೊರಬ ಮುಂತಾದವರು ಅಭಿನಯಿಸಿದ್ದು ಇವರೆಲ್ಲರಿಗೂ ನಟನೆ ಹೊಸ ಅನುಭವ. ಸನ್ನಿವೇಶಕ್ಕೆ ಪೂರಕವಾಗಿ ಒಂದು ಹಾಡಿಗೆ ಎಂ.ಡಿ.ಪಲ್ಲವಿ ಕಂಠದಾನ ಮಾಡಿದ್ದಾರೆ. ರಚನೆ,ನಿರ್ದೇಶನ ಪವನ್‌ಶಂಕರ್, ಛಾಯಗ್ರಹಣ ಇನೋಷ್‌ಓಲಿವೆರಾ- ಮಧುಸೂಧನ್‌ಭಟ್, ಸಂಕಲನ ರಂಜಿತ್‌ಸೇತು, ಸಂಗೀತ ಆರೋಹಣಸ್ಟುಡಿಯೋ, ಸಾಹಿತ್ಯ ಕೃಷ್ಣಮೂರ್ತಿ ಅವರದಾಗಿದೆ. ಜೀವಿತ ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗಿರುವ ಸಿನಿಮಾವು ಮುಂದಿನ ತಿಂಗಳ ಮೊದಲವಾರ ಬಿಡುಗಡೆಯಾಗಲಿದೆ.
Be the first to comment