ಸ್ಯಾಂಡಲ್ ವುಡ್ ನಲ್ಲಿ ಒಂದರ ಹಿಂದೆ ಒಂದಂತೆ ಆಘಾತಗಳು ಕಾಡತೊಡಗಿದೆ. ಕೊರೋನಾ ದಿಂದ ಕೆಲವರು ಸತ್ತರೆ ಅನಾರೋಗ್ಯದಿಂದ ಮತ್ತೆ ಕೆಲವರು ಸಾಯದಿದ್ದರೆ. ಈಗ ನಿರ್ದೇಶಕ ಜೋಗಿ ಪ್ರೇಮ್ ಅವರ ತಾಯಿ ಭಾಗ್ಯಮ್ಮ ವಿಧಿವಶರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದು , ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆ ಹೆಚ್ಚಾದ ಕಾರಣ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ತಾಯಿಯ ಬಗ್ಗೆ ಅಪಾರ ಮಮಕಾರವನ್ನು ಹೊಂದಿದವರು. ತಮ್ಮ ಪ್ರತಿ ಚಿತ್ರದಲ್ಲೂ ತಾಯಿಯ ಬಗ್ಗೆ ಒಂದು ವಿಶೇಷವಾದ ಹಾಡು ಅಥವಾ ಸಂದರ್ಭಗಳನ್ನು ಇಡುತ್ತಿದ್ದರು. ತಾಯಿಯ ಮೇಲಿನ ಪ್ರೀತಿ ಅವರ ಪ್ರತಿ ಚಿತ್ರದಲ್ಲೂ ಕಾಣುತ್ತಿತ್ತು.
ಅಮ್ಮನನ್ನು ಕಳೆದುಕೊಂಡ ನೋವು ಪ್ರೇಮ್ ರನ್ನು ಕಾಡುತ್ತಿದೆ. ತಮ್ಮ ಹುಟ್ಟೂರಾದ ಮಂಡ್ಯ ಜಿಲ್ಲೆಯ, ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯಲ್ಲಿ ಮಧ್ಯಾಹ್ನ 2.00 ಘಂಟೆಗೆ ಅಂತಿಮಕ್ರಿಯೆಯನ್ನು ನಡೆಸಲು ಸಿದ್ಧತೆ ನಡೆಸಿರುತ್ತಾರೆ.
ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರೋದ್ಯಮದ ಗಣ್ಯರು ಸಂತಾಪ ಸೂಚಿಸಿದ್ದಾರೆ
Be the first to comment