ಕೃಷ್ಣ ಅಜೇಯ್‍ರಾವ್ ನಿರ್ದೇಶನದ 25ನೆ ಚಿತ್ರವಾದ ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಯೂಟ್ಯೂಬ್‍ನಲ್ಲಿ ಬಹಳ ಬೇಡಿಕೆ ಕುದುರಿದೆ, ಆದ್ದರಿಂದ ಚಿತ್ರತಂಡವು ಆಡಿಯೋ ಸಕ್ಸಸ್ ಮೀಟ್ ಅನ್ನು ಕರೆದಿತ್ತು. ನಿರ್ದೇಶಕ ಶಶಾಂಕ್ ಮಾತನಾಡಿ, ಜಾಲತಾಣದಲ್ಲಿ ನಮ್ಮ ಹಾಡುಗಳಿಗೆ ಹೆಚ್ಚು ಡಿಮ್ಯಾಂಡ್ ಇದೆ, ಆಡಿಯೋ ಸಕ್ಸಸ್ ಅಂತ ಕರೆಯುತ್ತಾರೆ, ನಮ್ಮ ಹಾಡುಗಳು ದಾಖಲೆಯಾಗಿ ಮತ್ತೊಂದು ಮಜಲಿಗೆ ತೆಗೆದುಕೊಂಡು ಹೋಗಿರುವುದರಿಂದ ಈ ಸಮಾರಂಭವನ್ನು ಏರ್ಪಡಿಸಿದ್ದು, ಈ ರೀತಿ ಕಾರ್ಯಕ್ರಮ ಮಾಡಿರುವುದು ನಾವೇ ಮೊದಲು. ಸಿದ್ಧಾಂತಕ್ಕೆ ಹೋರಾಡುವ ತಾಯಿ ಮಗನ ಕತೆಯಾಗಿದ್ದು, ಬಿಡುಗಡೆ ಮುಂಚೆಯೇ ನಾವು ಹಾಕಿದ ಬಂಡವಾಳ ಸೇಫ್ ಆಗಿದೆ. ಪ್ರೇಕ್ಷಕರು ಮೆಚ್ಚಿಕೊಂಡರೆ ನಮಗೆ ತೃಪ್ತಿ ಸಿಗುತ್ತದೆ ಎಂದರು.
ಕೃಷ್ಣ ಅಜೇಯ್‍ರಾವ್ ಮಾತನಾಡಿ, ನಾನು ನಟಿಸಿದ ಮೊದಲ ಚಿತ್ರವಾದ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಅವರು ನನ್ನ ತಾಯಿಯಾಗಿದ್ದರು, ಈಗ ನನ್ನ 25 ಚಿತ್ರದಲ್ಲೂ ಅವರೇ ನನ್ನ ಅಮ್ಮನಾಗಿ ನಟಿಸಿದ್ದಾರೆ, ಈಗಿನ ಕಾಲಕ್ಕೆ ಪ್ರತಿನಿಧಿಯಾಗಿ ಒಳ್ಳೆಯದಗೋಸ್ಕರ ತಾಯಿಗೆ ತಕ್ಕ ಮಗ ಆಗ್ತಾನೆ, ಸಮಾಜದಲ್ಲಿ ಆಗುವ ಅನ್ಯಾಯವನ್ನು ಮೆಟ್ಟಿ ನಿಲ್ಲುವಂತೆ ತಮ್ಮ ಮಗನನ್ನು ರೂಪಿಸುವ ತಾಯಿಯಾಗಿ ಅವರು ನಟಿಸಿದ್ದಾರೆ ಎಂದರು.
ಸುಮಲತಾ ಅಂಬರೀಷ್ ಮಾತನಾಡಿ, ಈ ಚಿತ್ರದ ಪ್ರತಿ ಸನ್ನಿವೇಶವೂ ನೈಜಕ್ಕೆ ಹತ್ತಿರವಾಗಿದೆ, ಅಪ್ಪನ ಅನ್ಯಾಯವನ್ನು ಎದುರಿಸುವ ಮಗನನ್ನು ಸಿದ್ಧಪಡಿಸುವ ಹೆಣ್ಣಾಗಿ ನಾನಿಲ್ಲಿ ನಟಿಸಿದ್ದಾನೆ ಎಂದರು. ನಾಯಕಿ ಬೇಕು ಅಂತ ಆಯ್ಕೆ ಮಾಡಿಕೊಂಡಿಲ್ಲ. ಶಶಾಂಕ್ ಸರ್ ಚಿತ್ರದಲ್ಲಿ ನಟಿಸುವ ಬಯಕೆ ಇತ್ತು. ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದೆ ಎಂದು ಹೇಳಿದ್ದು ಆಶಿಕಾ ರಂಗನಾಥ್. ನಾನು ಬರೆದಿರುವ ಹಾಡುಗಳ ಮೂಲಕ ಅಜಯ್‍ರಾವ್ ನಾಯಕಿಯನ್ನು ಪ್ರೀತಿ ಮಾಡುತ್ತಾರೆ. ನಿರ್ದೇಶಕರಿಗೆ ಜನರ ನಾಡಿ ಮಿಡಿತ ಗೊತ್ತಿದೆ. ಅದಕ್ಕಂದೆ ಜನಪರ ಸಿನಿಮಾಗಳನ್ನು ಇಲ್ಲಿಯವರೆಗೂ ಮಾಡುತ್ತಾ ಬಂದಿದ್ದಾರೆ. ತಾಯಿ ಶಬ್ದಕ್ಕೆ ಹೊಸ ಆಯಾಮ ಬಂದಿದೆ. ಪ್ರತಿ ಚಿತ್ರದಲ್ಲಿ ಅನುಭವಿಗಳಿಗೆ ಸಾಹಿತ್ಯ ರಚಿಸಲು, ಹಾಡಲು ಅವಕಾಶ ನೀಡಿದಂತೆ ಹೊಸಬರಿಗೆ ಅಂತಹದನ್ನು ಕಲ್ಪಸಬೇಕೆಂದು ಜಯಂತ್‍ಕಾಯ್ಕಣಿ ಕೋರಿಕೊಂಡರು.
ಚಿತ್ರದ ಒಂದು ವೀಡಿಯೋ ಬಿಡುಗಡೆ ಮಾಡಿ ಮಾತನಾಡಿದ ನಟ ಉಪೇಂದ್ರ, ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿರುವುದಕ್ಕೆ ಬೇಸರ ಬೇಡ, ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಎ ಗ್ರೇಡ್ ಕಲಾವಿದರು, ಸಾಹಿತಿಗಳು, ಸಂಗೀತ ನಿರ್ದೇಶಕರು ಕೆಲಸ ಮಾಡಿರುವುದರಿಂದ ಚಿತ್ರವು ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸಿದೆ. ಶಶಾಂಕ್ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಸ್ಟಾರ್ ನಿರ್ದೇಶಕರು. ಅವರ ಚಿತ್ರದಲ್ಲಿ ನಟಿಸುವ ಬಯಕೆ ಇದೆ. ಸುಮಲತಾ ಮೇಡಂ ಮದರ್ ಇಂಡಿಯಾ. ಎಲ್ಲ ತಾಯಂದಿರು ನೋಡಲೇ ಬೇಕಾದ ಸಿನಿಮಾ ಎಂದರು.
ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಇಂದಿನ ಅಮ್ಮಂದಿರು ಹೇಗಿರಬೇಕು, ಮುಂದಿನ ತಲೆಮಾರಿಗೆ ಹೇಗೆ ಮಾದರಿಯಾಗಬೇಕೆಂಬುದನ್ನು ಬಿಂಬಿಸುವಂತಹ ಪಾತ್ರದಲ್ಲಿ ಸುಮಲತಾ ಮೇಡಂ ಕಾಣಿಸಿಕೊಂಡಿದ್ದಾರೆ, ನಿರ್ದೇಶಕರ ಅಭಿಮಾನಿಯಾಗಿದ್ದರಿಂದ ಪತಿ ಜೊತೆಗೆ ಬಂದೆ ಎಂದರು. ನವಂಬರ್ ಎರಡನೆ ವಾರ ತರೆ ಕಾಣುವ ಸಾದ್ಯತೆ ಇದೆ. ಕೃಷ್ಣ ಅಜೇಯರ್‍ರಾವ್‍ರ ಚಿತ್ರ ಜೀವನದ 25ನೆ ಚಿತ್ರವಾದ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಸಕ್ಸಸ್ ಸಿಗುವಂತಾಗಲಿ.
Pingback: rolex replica watches
Pingback: Unicc
Pingback: www.tinysexdolls.com
Pingback: devops outsourcing company
Pingback: Driveway Repair Statesville NC
Pingback: Bell Ross fakes