ಮುದ್ದು ಮುದ್ದಾದ ನಗು, ಪಟ ಪಟ ಅಂತ ಮಾತು, ಫೇಸ್ ಬುಕ್ ಟ್ವಿಟರ್ನಲೆಲ್ಲ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟಿ ಈ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಯಾರು ನಾಯಕಿ ಅಂತ ಎಲ್ಲರೂ ಕಾಯ್ತಿದ್ದ ವೇಳೆಯಲ್ಲೇ ಕನ್ನಡಕ ಹಾಕಿ ಸ್ಕೂಟರ್ ಒಡಿಸ್ಕೊಂಡು “ಬೆಳಗೆದ್ದು ಯಾರ ಮುಖವ ನಾನು ನೋಡಿದೆ” ಅನ್ನೋ ಹಾಡಿನ ಮೂಲಕ ಮೊದಲ ನೋಟದಲ್ಲೇ ಎಲ್ಲರ ಹೃದಯದಲ್ಲೂ ಹೆಜ್ಜೆ ಹಾಕಿದ್ದ ಬೆಡಗಿ ಈ ರಶ್ಮಿಕಾ……
ರಶ್ಮಿಕಾ ಮಂದಣ್ಣ ಸದ್ಯ ಕರ್ನಾಟಕದಲ್ಲಿ ಮನೆಮಾತಾಗಿರುವ ನಾಯಕ ನಟಿ.. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವಂತ ಬೆಡಗಿ.. ಸದ್ಯ ಈ ಸುಂದರಿ ನಟಿಸುವ ಪ್ರತಿಯೊಂದು ಸಿನಿಮಾ ದ ಮೇಲು ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಳ್ಳಲಾರಂಭಿಸಿವೆ… ಹೌದು, ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ, ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿಬಿಟ್ರು. ಈ ಚಿತ್ರದ ಬಳಿಕ ಕನ್ನಡದ ‘ಅಂಜನಿಪುತ್ರ’ ಹಾಗೂ ‘ಚಮಕ್’ ಚಿತ್ರದಲ್ಲಿ ನಟಿಸಿ.. ಎಲ್ಲರಿಗೂ ಹಾಟ್ ಫೇವರಿಟ್ ಆದ್ರು..
ಈ ಬೆಡಗಿ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್ನಲ್ಲೂ ಸಹ ಹವಾ ಸೃಷ್ಠಿಸಿ.. ಪಡ್ಡೆ ಹುಡುಗರ ಮನಸ್ಸನ್ನ ಕದ್ದದ್ದೂ ಆಯ್ತು… ನಾಗಶೌರ್ಯ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಲೋ ಚಿತ್ರ ಈ ಮೊದಲು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು..ಕಾಲೇಜ್ ಸ್ಟೂಡೆಂಟ್ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಲವ್ ಸ್ಟೋರಿ ಜೊತೆಗೆ ಸಖತ್ ಮಾಸ್ ಎಲಿಮೆಂಟ್ ಕೂಡಾ ಇರೋದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿ ಚಿತ್ರ… ರನ್ನಿಂಗ್ ಸಕ್ಸಸ್ ನ ಖುಷಿ ಯಲ್ಲಿ ತೇಲಾಡಿತ್ತು.
ಈ ಎಲ್ಲಾ ಸಕ್ಸಸ್ ನ ನಂತ್ರ ಯಾವ ಸಿನಿಮಾ ಮಾಡ್ತಾರೆ ಅಂತ ಕಾದಿದ್ದ ಅಭಿಮಾನಿಗಳಿಗೆ ಟಾಲಿವುಡ್ ನ ಮತ್ತೊಬ್ಬ ಸೂಪರ್ ಸ್ಟಾರ್ ಅಜಯ್ ದೇವರಕೊಂಡ ಜೊತೆ ನಟಿಸ್ತಾ ಇರೋದು ತಿಳಿದು ಖುಷ್ ಆಗಿದಾರೆ. ಹೌದು ನಟ ವಿಜಯ್ ದೇವರಕೊಂಡ ತಮ್ಮ ನ್ಯಾಚುರಲ್ ಆ್ಯಕ್ಟಿಂಗ್ ಕೈ ಚಳಕ ತೋರಿಸಿ, ‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ಅಂದು ಇಂಡಸ್ಟ್ರಿಗೆ ಕಾಲಿಟ್ಟು, ಈಗ ಬ್ಯೂಸಿಯಸ್ಟ್ ನಟರಲ್ಲಿ ಒಬ್ಬರಾದವರು.
ಇತ್ತ ರಶ್ಮಿಕಾ ಮಂದಣ್ಣ ಕೂಡ ಬಹು ಬೇಡಿಕೆಯ ನಟಿ ಅಂತ ಗುರುತಿಸಿಕೊಂಡು ಸಾಲು-ಸಾಲು ಚಿತ್ರಗಳ ಆಫರ್ ಕೈಯಲ್ಲಿ ಇಟ್ಕೊಂಡವರು.ಹಾಗಾಗಿ ವಿಜಯ್ ಹಾಗೂ ರಶ್ಮಿಕಾ ಕಾಂಬಿನೇಷನ್ ಹೇಗಿರತ್ತೋ ಅಂತ ನೋಡೋಕೆ ಕಾಯ್ತಾ ಇದ್ದ ಫ್ಯಾನ್ಸ್ ಈಗ , ಚಿತ್ರದ ಲಿರಿಕಲ್ ವೀಡಿಯೋ ಹಾಗೂ ಟೀಸರ್ ನೋಡಿ ಸಿನಿಮಾ ನೋಡೋಕೆ ಕಾಯ್ತಾ ಇದಾರೆ..
ಕನ್ನಡಕ್ಕೆ ಸಮನಾಗಿ ತೆಲುಗಿನಲ್ಲೂ ರಶ್ಮಿಕಾಗೆ ಹತ್ತಾರು ಆಫರ್ ಹುಡುಕಿ ಬರ್ತಿವೆ. ತೆಲುಗಿನಲ್ಲಿ ನಟಿಸಿದ ‘ಚಲೊ’ ಸಿನಿಮಾ ಗಲ್ಲಾಪೆಟ್ಟಿಗೆ ಗೆಲುವು ಸಾಧಿಸಿತ್ತು. ಈಗ ‘ರೌಡಿ ಹೀರೋ’ ವಿಜಯ್ ದೇವರಕೊಂಡ ಜೊತೆ ‘ಗೀತಾ ಗೋವಿಂದಂ’ನಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಸೌತ್ ಇಂಡಿಯಾದಲ್ಲಿ ಸೆನ್ಷೇಷನ್ ಸೃಷ್ಟಿಸಿವೆ. ಇತ್ತೀಚೆಗೆ ನಡೆದ ‘ಗೀತಾ- ಗೋವಿಂದಂ’ ಆಡಿಯೋ ಲಾಂಚ್ನಲ್ಲೂ ರಶ್ಮಿಕಾ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು. ಸಾಧ್ಯವಾದಷ್ಟು ಶುದ್ಧ ತೆಲುಗಿನಲ್ಲೇ ರಶ್ಮಿಕಾ ಮಾತನಾಡಿದರು. ಎರಡೇ ಸಿನಿಮಾಗೆ ತೆಲುಗು ಕಲಿಯುತ್ತಿರೋ ಸ್ಪೀಡ್ ನೋಡಿದ್ರೆ, ರಶ್ಮಿಕಾ ಟಾಲಿವುಡ್ನಲ್ಲೇ ನೆಲೆನಿಲ್ತಾರಾ ಅನ್ನೋ ಡೌಟು ಅಭಿಮಾನಿಗಳದ್ದು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕೂಡ ರಶ್ಮಿಕಾ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಗೀತಾ- ಗೋವಿಂದಂ ನಂತರ ಮತ್ತೆರಡು ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ನಟಿಸ್ತಿದ್ದಾರೆ.
ಒಂದು ಕಡೆ ಕನ್ನಡದ ಬೆಡಗಿ ಪರಭಾಷೆಯಲ್ಲಿ ಮಿಂಚುತ್ತಾ ಇರೋ ಖುಷಿಯಾದ್ರೆ ,ಇನ್ನೊಂದು ಕಡೆ ರಶ್ಮಿಕಾಳ ಕನ್ನಡ ಅಭಿಮಾನಿಗಳಿಗೆ ಪರಭಾಷೆಗೆ ಹಾರಿದ ನಟಿ ಕನ್ನಡಕ್ಕೆ ಬಾಯ್ -ಬಾಯ್ ಹೇಳ್ತರಾ ಅಂತಾ ಆತಂಕದ ಪ್ರಶ್ನೆ ಮೂಡಿದೆ.ಈ ತರಹದ ಪ್ರಶ್ನೆ ಸಹಜವಾದ್ದೇ ಆದ್ರು ಈ ಪ್ರಶ್ನೆಗೆ ಕಿರಿಕ್ ಬೆಡಗಿನೇ ಆ್ಯನ್ಸರ್ ಮಾಡ್ಬೇಕು.
Pingback: dev ops services
Pingback: CI CD
Pingback: playing cornhole