‘ಕಳ್ದೊಗ್ಬುಟ್ಟೆ ಕಣೇ’ ವೀಡಿಯೋ ಆಲ್ಬಂ ಬಿಡುಗಡೆ

ಎಂಟು ವರ್ಷಗಳ ಹಿಂದೆ ಟೀಮ್ ಯುವಾಸ್ ಮ್ಯೂಸಿಕ್ ಕಂಪನಿ ಸ್ಥಾಪಿಸಿದ ಡ್ಯಾನ್ಸರ್ ಯುವ ರಾಜ ವೈಬುಲ್ ಕಳ್ದೊಗ್ಬುಟ್ಟ ಕಣೇ ಎಂಬ ವೀಡಿಯೋ ಆಲ್ಬಂ ಅನ್ನು ಮಾಡಿದ್ದು ಅದನ್ನು ಯುಟ್ಯೂಬ್‍ನಲ್ಲಿ ಹರಿಬಿಟ್ಟಿದ್ದಾರೆ.ಈ ಆಲ್ಬಂಅನ್ನು ವೀಕ್ಷಿಸಿದವರು 60 ಲಕ್ಷಕ್ಕೂ ಹೆಚ್ಚು ಲೈಕ್ಸ್‍ಗಳು ಸಿಕ್ಕಿರುವುದರಿಂದ ಇದರ ನಿರ್ಮಾಪಕ ಯುವರಾಜ ಮತ್ತೊಂದು ಆಲ್ಬಂ ನಿರ್ಮಿಸುವ ಹುಮ್ಮಸ್ಸು ತೋರಿದ್ದಾರೆ.

ಕಳ್ದೊಗ್ಬುಟ್ಟ ಕಣೆ ವೀಡಿಯೋ ಆಲ್ಬಂ ಅನ್ನು ಮೊನ್ನೆ ಉಮೇಶ್‍ಬಣಕಾರ್ ಮತ್ತು ಹರೀಶ್‍ರಾಜ್ ಅವರು ಆಲ್ಬಂ ಬಿಡುಗಡೆ ಮಾಡಿದರು. ಕರವೇನ ರಾಮಚಂದ್ರೇಗೌಡರು, ಈಶ್ವರ ಶ್ಯಾಂ ಸುಂದರ, ನಟರಾಜ್ ಹಾಗೂ ಇತರ ಪ್ರಮುಖರು ಆಗಮಿಸಿ ಯುವರಾಜನ ಕಾರ್ಯವನ್ನು ಮೆಚ್ಚಿಕೊಂಡರು.

ಯುವರಾಜ ಮಾತನಾಡಿ, ನಾಲ್ಕು ನಿಮಿಷಗಳ ಕಾಲ ಇರುವ ಈ ವೀಡಿಯೋದಲ್ಲಿ ಸಿಗ್ನೇಚರ್ ಸ್ಟೆಪ್ಸ್ ಅನ್ನು ಪರಿಚಯಿಸಿದ್ದು ಸಂಗೀತ ಪ್ರೇಮಿಗಳು ಡ್ಯಾನ್ಸ್ ಮಾಡಿ ಅದನ್ನು ಕಳಿಸಿದರೆ ಈ ಆಲ್ಬಂನಲ್ಲಿ ಅಳವಡಿಸುತ್ತೇವೆ ಎಂದು 10 ದಿನಗಳ ಕಾಲಮಿತಿಯನ್ನು ನೀಡಿದ್ದಾರೆ, ಈ ವೀಡಿಯೋ ಆಲ್ಬಂಗೆ 10 ಲಕ್ಷ ರೂ. ಖರ್ಚಾಗಿದೆ ಎಂದ ಹೇಳಿದರು.

ಉಮೇಶ್ ಬಣಕಾರ್ ಮಾತನಾಡಿ, ಯುವರಾಜ್ ಅವರು ಮಾಡಿರುವ ಕಳ್ದೊ ಗ್ಬುಟ್ಟ ಕಣೇ ವೀಡಿಯೋ ಆಲ್ಬಂಗೆ 60 ಲಕ್ಷ ಲೈಕ್ಸ್‍ಗಳು ಬಂದಿರುವುದು ಹೆಮ್ಮೆಯ ಸಂಗತಿ. ಯುವರಾಜನ ಅಣ್ಣ ನನಗೆ ತುಂಬಾ ಪರಿಚಯ, ಆದ್ದರಿಂದಲೇ ಈ ಕಾರ್ಯಕ್ರಮಕ್ಕೆ ಬಂದೆ.

ಯುವರಾಜ್ ಅವರ ಈ ವೀಡಿಯೋ ಆಲ್ಬಂಅನ್ನು ಕೋಟಿ ಜನರಿಗೆ ತಲುಪುವಂತಾಗಲಿ ಎಂದು ಹಾರೈಸಿದರು. ನಟ ಹರೀಶ್‍ರಾಜ್ ಮಾತನಾಡಿ, ಈಗಿನ ಯುವ ತಾರೆಯರಿಗೆ ಹಾಡು ತುಂಬಾ ಬೇಗನೆ ತಲುಪುತ್ತದೆ. ಯುವರಾಜ ಒಳ್ಳೆ ಡ್ಯಾನ್ಸರ್ ಆಗಿರುವುದರಿಂದ ಈ ವೀಡಿಯೋ ಜನರಿಗೆ ಬೇಗನೇ ರೀಚ್ ಆಗುತ್ತಿದೆ ಎಂದು ಹೇಳಿದರು.

This Article Has 1 Comment
  1. Pingback: Casino

Leave a Reply

Your email address will not be published. Required fields are marked *

Translate »
error: Content is protected !!