ಜ್ಯೋತಿ ಫಿಲ್ಮ ಲಾಂಛನದಲ್ಲಿ ಗಿರ್ಜಾಕುಮಾರ್ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ, ಉತ್ತರ ಕರ್ನಾಟಕದ ಸೊಗಡಿನ ಕಥಾನಕ ಹೊಂದಿರೋ ಚಿತ್ರ ’ಖೊಟ್ಟಿ ಪೈಸೆ’. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಭಾಷೆಯ ಚಿತ್ರ ಇದಾಗಿದ್ದು ಚಲಾವಣೆಯಲ್ಲಿರದ ನಾಣ್ಯವನ್ನು ಆ ಭಾಗದಲ್ಲಿ ಖೊಟ್ಟಿ ಪೈಸೆ ಎಂದು ಕರೆಯುತ್ತಾರೆ. ಕಿರಣ್ ಕೆ.ಆರ್. ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ 1998 ರ ಸಮಯದಲ್ಲಿ 5, 10 ಪೈಸೆಯ ನಾಣ್ಯಗಳು ಬ್ಯಾನ್ ಆದಾಗ ಮನುಷ್ಯನ ಜೀವನಕ್ಕೂ ಆ ನಾಣ್ಯಗಳಿಗೂ ಇರುವ ಸಂಬಂಧದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಕರ್ನಾಟಕ ಅಲ್ಲದೆ ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಲಿದೆ.
ಮನುಷ್ಯ ಬದುಕಿರುವವರೆಗೂ ಹೋರಾಟ, ಆದರೆ ಸತ್ತಮೇಲೆ ಯಾವುದೂ ನಮ್ಮ ಜೊತೆ ಬರುವುದಿಲ್ಲ ಎಂಬ ನೀತಿಯನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಈ ಚಿತ್ರಕ್ಕೆ ಬಾಗಲಕೋಟೆ ಜಿಯ ಮುರನಾಳ, ಗದಗ ಜಿಯ ಲಕ್ಷ್ಮೇಶ್ವರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಸದಾಶಿವ ಹಿರೇಮಠ್ ಅವರ ಛಾಯಾಗ್ರಹಣ, ರವಿತೇಜ ಅವರ ಸಂಗೀತ ಸಂಯೋಜನೆ, ವೆಂಕಿ ಅವರ ಸಂಕಲನವಿದೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕ ಅದರಲ್ಲಿಯೂ ಬಾಗಲಕೋಟೆ ಮತ್ತು ವಿಜಯಪುರದ ಹೆಚ್ಚು ಕಲಾವಿದರು ನಟಿಸಿzರೆ. ಹಾಸ್ಯನಟ ವೈಜನಾಥ ಬಿರಾದಾರ, ರಾಮಚೇತನ, ಸಹನ, ಕಿರಣ್ ಕೆ.ಆರ್, ಬೇಬಿ ಸೃಷ್ಟಿ, ರಚಿಕಾ, ಮೋಹನ್ ಆರ್. ಕೆ, ಕುಮಾರಗೌಡರ್, ವಸಂತಲಕ್ಷ್ಮಿ, ಮಂಜುನಾಥ ಪಾಟೀಲ್, ಗೋಪಾಲ್ ಬಿಪಿ. ವಿಜಯಕುಮಾರ್ ಸೇರಿದಂತೆ ಇನ್ನಿತರ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರೆ.
Be the first to comment