ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಡಾ. ರಾಜಕುಮಾರ್ ಕುಟುಂಬದ ಅನೇಕ ಸದಸ್ಯರು ಬಂದು ರಾಘವೇಂದ್ರ ರಾಜಕುಮಾರ್ ಮತ್ತು ‘ಅಮ್ಮನ ಮನೆ’ ಚಿತ್ರತಂಡಕ್ಕೆ ಶುಭ ಹಾರೈಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಇದು
ನನ್ನ ಚಿತ್ರವಲ್ಲ. ಬದಲಿಗೆ ಒಂದೊಳ್ಳೆಯ ಚಿತ್ರದಲ್ಲಿ ತಾನಿದ್ದೇನೆ ಎಂದು ಹೇಳಿಕೊಂಡಿದ್ದಾರೆ.ನಾನು 14 ವರ್ಷಗಳ ಬಳಿಕ ಮತ್ತೆ ಬಂದಿದ್ದೇನೆ. ಇದು ನನ್ನ ಎರಡನೇಯ ಇನ್ನಿಂಗ್ಸ್. ನಿರ್ದೇಶಕ ನಿಖಿಲ್ ಮಂಜು ಒಳ್ಳೆಯ ಕಥೆ ತಂದರು. ಕಥೆ ಕೇಳಿ ಬಹಳ ಇಷ್ಟವಾಯಿತು. ಹಾಗಾಗಿ ಒಪ್ಪಿಕೊಂಡೆ. ನಾನು ಅನಾರೋಗ್ಯದಿಂದಿರುವಾಗ ಹೇಗೆ ಈ ಪಾತ್ರಕ್ಕೆ ಸೂಕ್ತ ಎಂದು ಎಲ್ಲರಿಗೂ ಪ್ರಶ್ನೆ ಕಾಡಬಹುದು. ನಿರ್ದೇಶಕರು ಈ ಕಥೆ ತಂದಾಗ, ನಾನೂ ಈ ಪ್ರಶ್ನೆಯನ್ನೇ ಮುಂದಿಟ್ಟೆ. ಆಗ ನಿರ್ದೇಶಕರು, ತಮಗೆ ‘ನಂಜುಂಡಿ ಕಲ್ಯಾಣ’ ಮತ್ತು ‘ಗಜಪತಿ ಗರ್ವಭಂಗ’ ಚಿತ್ರದ ರಾಘಣ್ಣ ಬೇಡ. ಕಳೆದ 15 ವರ್ಷಗಳಿಂದ ಜವಾಬ್ದಾರಿ ಹೊತ್ತು ಫ್ಯಾಮಿಲಿಯನ್ನು ತೂಗಿಸಿಕೊಂಡು ಹೋಗುತ್ತಿರುವ ರಾಘಣ್ಣ ಬೇಕು ಎಂದು ಹೇಳಿದರು.
ಅದೇ ಕಾರಣಕ್ಕೆ ಈ ಚಿತ್ರ ಒಪ್ಪಿದೆ. ಮೊದಲ ಚಿತ್ರದ ವೇಳೆ ಅಪ್ಪ, ಅಮ್ಮ ಇದ್ದರು. ಅವರ ದೊಡ್ಡ ಸಹಕಾರವಿತ್ತು. ಈಗ ಅವರಿಲ್ಲ. ಅವರನ್ನು ಈ ತಂಡದಲ್ಲಿ ನೋಡುತ್ತಿದ್ದೇನೆ ಎನ್ನುತ್ತಾರೆ ರಾಘಣ್ಣ. ತಾನು ಸಿನಿಮಾದಲ್ಲಿ ಇದ್ದೀನಿ ಅನ್ನೋದು ಬಿಟ್ಟರೆ, ನಿರ್ದೇಶಕರು ಹೇಳಿದ್ದನ್ನು ಒಪ್ಪಿಸೋದಷ್ಟೇ ನನ್ನ ಕೆಲಸ. ಜನರನ್ನು ಒಪ್ಪಿಸುವ ಕೆಲಸ ನಿರ್ದೇಶಕರು ಮಾಡುತ್ತಾರೆ. ನೋಡುಗರನ್ನು ತೃಪ್ತಿ ಪಡಿಸುತ್ತಾರೆ ಎಂಬ ನಂಬಿಕೆ ಇದೆ. ಈ ಪಾತ್ರಕ್ಕೆ ಯಾವ ತಯಾರಿ ಇಲ್ಲ. ಖಾಲಿ ಹಾಳೆಯ ತರಹ ಹೋಗುತ್ತೀನಿ. ನಿರ್ದೇಶಕರು ಬರೆದ ಹಾಗೆ ಬರೆಸಿಕೊಳ್ತೀನಿ ಎಂದು ಅವರು ಹೇಳಿದ್ದಾರೆ.
Pingback: 트루모아