`ಅಮೃತ ವಾಹಿನಿ’ ಚಿತ್ರದ ಚಿತ್ರೀಕರಣ ಪೂರ್ಣ
” ಓ ಗುಲಾಬಿ”, “ಪಲ್ಲಕ್ಕಿ” , “ಯುವ”, “ನಂ-9 ಹಿಲ್ಟನ್ ಹೌಸ್” ಗಳಂತಹ ಯಶಸ್ವಿ ಚಿತ್ರ ನೀಡಿದ ಖ್ಯಾತಿಯ ನಿರ್ದೇಶಕ ಕೆ. ನರೇಂದ್ರಬಾಬು ಅವರ ಹೊಸ ಚಿತ್ರ “ಅಮೃತವಾಹಿನಿ”ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣವಾಗಿದ್ದು, ಡಬ್ಬಿಂಗ್ ಕೆಲಸವೂ ಮುಗಿದಿದ್ದು, ಮುಂದಿನ ಹಂತದ ಕೆಲಸ ಬಿರುಸಿನಿಂದ ಸಾಗಿದೆ.
ಶ್ರೀ ಅನಂತ ಪದ್ಮನಾಭ್ ಅರ್ಪಿಸುವ ಯು.ವಿ. ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಸಂಪತ್ ಕುಮಾರ್ ಹಾಗೂ ಅಕ್ಷಯ್ ರಾವ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕವಿ. ರಾಘವೇಂದ್ರ ಪಾಟೀಲರ ಕಾದಂಬರಿ ಆಧಾರಿತ ಕಥೆಯನ್ನು ಬಳಸಿಕೊಳ್ಳಲಾಗಿದೆ. ಪ್ರಸಿದ್ಧ ಕವಿ. ಡಾ. ಎಚ್.ಎಸ್. ವೆಂಕಟೇಶಮೂರ್ತಿ ಪ್ರಮುಖ ಪಾತ್ರದಲ್ಲಿದ್ದು, ಮೊದಲ ಚಿತ್ರವಾಗಿದ್ದರೂ ಮನಮಿಡಿಯುವಂತೆ ನಟಿಸಿದ್ದಾರೆ. ಬೆಂಗಳೂರು ಹಾಗೂ ರಾಮನಗರದ ಸುತ್ತ ಮುತ್ತ ಚಿತ್ರೀಕರಿಸಿದ್ದು, ಸುಂದರವಾಗಿ ಮೂಡಿಬಂದಿದೆ. ಇದೀಗ ತಾನೇ ಹಸಿರು ರಿಬ್ಬನ್ ಚಿತ್ರದಲ್ಲಿ ಮನೋಹರವಾದ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಈ ಚಿತ್ರದ 4 ಹಾಡುಗಳಿಗೆ ಸಂಗೀತ ನೀಡಿದ್ದು ಇವೆಲ್ಲವೂ ಮಧುರವಾಗಿ ಮೂಡಿಬಂದಿದೆ. ಎಚ್.ಎಸ್.ವಿ. ಹಾಡುಗಳನ್ನು ಬರೆದಿದ್ದಾರೆ. ಕನ್ನಡದ ಪ್ರತಿಭಾವಂತ ಗಾಯಕ-ಗಾಯಕಿಯರು ಹಾಡಿದ ಈ ಗೀತೆಗಳು ನಮ್ಮ ಸೊಗಡಿನ ಗೀತೆಗಳಾಗಿವೆ..
ಕೆ.ನರೇಂದ್ರಬಾಬು ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಹಿನ್ನಲೆ ಸಂಗೀತ ನೀಡಿ ಛಾಯಾಗ್ರಹಣವನ್ನು ಮಾಡಿದ್ದಾರೆ. ಕೆ.ಶಿವಾನ್‍ಂದ್ ಸಂಭಾಷಣೆ ಬರೆದಿದ್ದಾರೆ. ಕೆ.ಗಿರೀಶ್ ಕುಮಾರ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಡಾ||ಎಚ್.ಎಸ್.ವೆಂಕಟೇಶಮೂರ್ತಿ, ವತ್ಸಲಾಮೋಹನ್, ಸಂತೋಷ್ ಎಸ್ ಕರ್ಕಿ, ವಿದ್ಯಾ ಶಿವಮೊಗ್ಗ, ಡಾ||ಶ್ಯಾಲಿ, ಸುಪಿಯ ಎಸ್ ರಾವ್, ಆರ್.ಟಿ.ರಮ, ರೋಹಿಣಿ ಕೆ ರಾಜ್, ಮಂಜೇಶ್, ವಿಷ್ಣು ಭಾಸ್ಕರ್, ಮಾಸ್ಟರ್ ಪ್ರದಿಪ್ತ್ ಗೌತಮ್, ಮಾಸ್ಟರ್ ಆರ್ಯನ್ ಸೂರ್ಯ, ಬೇಬಿ ರುತ್ವಿ ಮುಂತಾದವರಿದ್ದಾರೆ.
Be the first to comment