ರಾಜ್ಗುರು ನಿದೇಶನದ ನಟ-ನಿರ್ಮಾಪಕ ಗೌರಿ ಶಂಕರ್ ಇಬ್ಬರು ಕೂಡ ಮೂಲತಃ ಮಲೆನಾಡಿನವರು. ಬಾಲ್ಯದಿಂದಲೂ ಅವರು ಕೆರೆಬೇಟೆ ನೋಡುತ್ತಾ ಬೆಳೆದಿದ್ದಾರೆ. ಅದನ್ನೇ ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ ಸಾಕಷ್ಟು ಅಂಶಗಳನ್ನು ತೋರಿಸಲಾಗಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಶೀರ್ಷಿಕೆ ಭಿನ್ನವಾಗಿದ್ದರೆ ಸುಲಭವಾಗಿ ಪ್ರೇಕ್ಷಕರ ಗಮನ ಸೆಳೆಯಬಹುದು. ‘ಕೆರೆಬೇಟೆ’ ಸಿನಿಮಾ ಆ ಕೆಲಸ ಮಾಡುತ್ತಿದೆ. ಟೈಟಲ್ನಿಂದ ಈ ಸಿನಿಮಾ ಕುತೂಹಲ ಮೂಡಿಸಿದೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈಗ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರ ಕೌತುಕವನ್ನು ಹೆಚ್ಚಿಸಲಾಗಿದೆ. ಇದು ಮಲೆನಾಡು ಭಾಗದ ಮೀನು ಬೇಟೆ ಪದ್ಧತಿಯ ಕುರಿತು ನಿರ್ಮಾಣ ಆಗಿರುವ ಸಿನಿಮಾ. ನಿರ್ದೇಶಕ ರಾಜ್ ಗುರು ಅವರು ಇದೇ ಮೊದಲ ಬಾರಿಗೆ ಮೀನು ಬೇಟೆಯ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಗೌರಿಶಂಕರ್ ಎಸ್ಆರ್ಜಿ ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಇರುವ ಚಿತ್ರಕ್ಕೆ ಪ್ರೇಕ್ಷಕರು ಮನ ಸೋಲುತ್ತಾರೆ. ‘ಕೆರೇಬೇಟೆ’ ಚಿತ್ರದಲ್ಲೂ ಅಂಥ ಕಹಾನಿ ಇರಲಿದೆ.
ಅಕ್ಟೋಬರ್ 27ರಂದು ಬಿಡುಗಡೆಯಾಗಿರುವ ‘ಕೆರೆಬೇಟೆ’ ಮೋಷನ್ ಪೋಸ್ಟರ್ನಲ್ಲಿ ಹೀರೋ ಗೌರಿಶಂಕರ್ ಕೂಣಿ ಹಿಡಿದು ಕೆರೆಯಲ್ಲಿ ಮೀನು ಬೇಟೆ ಆಡುತ್ತಿರುವ ದೃಶ್ಯ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ರಾ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗೌರಿ ಶಂಕರ್ ಅವರ ಹಿಂದೆ ಜನರ ದೊಡ್ಡ ಗುಂಪು ಇದೆ. ಮೀನು ಬೇಟೆಯ ಕಥೆ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿಸುವ ರೀತಿಯ ಈ ಪೋಸ್ಟರ್ ಮೂಡಿಬಂದಿದೆ.
Be the first to comment