ಸಿದ್ದತೆ ಮಾಡಿಕೊಳ್ಳದೆ ಕಲಾವಿದರಾಗವುದುಕಷ್ಟದ ಕೆಲಸ. ತರಭೇತಿ ಪಡೆದುಕೊಂಡು ಬಂದಲ್ಲಿಕ್ಯಾಮಾರ ಮುಂದೆ ನಿಲ್ಲಲು ಸುಲಭವಾಗುತ್ತದೆಂದು ಹೆಸರಾಂತ ನಿರ್ದೇಶಕ ಹಾಗೂ ಪ್ರಸಕ್ತ ಬ್ಯುಸಿ ಇರುವ ನಟ ಶಿವಮಣಿ ಅಭಿಪ್ರಾಯ ಪಟ್ಟರು.ಅವರು ‘ಕಲಾ ವಿಧ ಫಿಲಿಂಅಕಾಡೆಮಿ’ಯ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಣೆ ಮಾಡಿಮಾತನಾಡುತ್ತಿದ್ದರು.
ಮಾತು ಮುಂದುವರೆಸುತ್ತಾಒಂದೇ ಸಲ ಎರಡು ಕೆಲಸವನ್ನು ಮಾಡಲು ಹೋದರೆ ಫಲಿತಾಂಶ ಶೂನ್ಯವಾಗುತ್ತದೆ.ಒಂದಕ್ಕೆ ಸೀಮಿತಗೊಂಡು ಬದ್ದತೆಯಿಂದ ಮುಂದುವರೆದರೆ ಒಳ್ಳೆಯದು. ವಿದ್ಯಾರ್ಥಿಗಳುಇಲ್ಲಿಗೆ ಬಂದ ನಂತರ ಕಲಾವಿದನಾಗಬೇಕೆಂದು ಬಯಸುವುದು ಬೇಡ. ಎಲ್ಲವನ್ನು ಆಸಕ್ತಿಯಿಂದ ಕಲಿತುಕೊಂಡು ಪ್ರತಿಭೆ ತೋರಿಸಿದಾಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ಹೊರಗೆ ಹೋಗುತ್ತಿರುವ ನಿಮಗೆ ಇಂದಿನಿಂದ ಹೆಚ್ಚಿನಜವಬ್ದಾರಿ ಬಂದಿದೆ. ನೀವುಗಳು ಭವಿಷ್ಯದಲ್ಲಿ ಸಮಯಪಾಲನೆ, ಶ್ರದ್ದೆ ರೂಡಿಸಿಕೊಳ್ಳಬೇಕು.ಜೋಶ್ ಸಿನಿಮಾ ಮಾಡುವ ಸಂದರ್ಭದಲ್ಲಿ ಹನ್ನೆರಡು ಸಾವಿರ ಮಕ್ಕಳನ್ನು ಅಡಿಷನ್ ಮಾಡಲಾಗಿತ್ತು.
ಆ ಸಂದರ್ಭದಲ್ಲಿಇಂತಹ ಶಾಲೆಗಳು ಇದ್ದರೆ ಅನುಕೂಲವಾಗುತ್ತಿತ್ತು.ಡಾ.ರಾಜ್ಕುಮಾರ್ 200 ಚಿತ್ರಗಳಲ್ಲಿ ನಟಿಸಿದ್ದರೂ ತಾನಿನ್ನುಕಲಿಯುವುದುಇದೇಎನ್ನುತ್ತಿದ್ದರು. ಕಿರುಚಿತ್ರ, ಡ್ಯಾನ್ಸ್ ಪ್ರದರ್ಶನ ಮಾಡಿದ್ದುಚೆನ್ನಾಗಿದೆ.ನಮ್ಮ ನೆಲದ ಸೊಗಡಿನಕತೆಯನ್ನುತೆಗೆದುಕೊಂಡು ಮಕ್ಕಳಲ್ಲಿ ನಟನೆ ಮಾಡಿಸಿದ್ದರಿಂದ ಎಲ್ಲರಿಗೂಕನೆಕ್ಟ್ಆಗುತ್ತದೆ.
ಪೋಷಕರಾದವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಕೊಡಬೇಕು.ಅವರು ನಮಗಿಂತ ಬುದ್ದಿವಂತರು.ಯತಿರಾಜ್, ಅರವಿಂದ್ ಶ್ರಮ ನಿಮ್ಮಲ್ಲಿ ಕಾಣಿಸಿಕೊಂಡಿದೆ.ಮುಂದೇ ನಿರ್ದೇಶನ ಮಾಡುವಚಿತ್ರದಲ್ಲಿ ಮಕ್ಕಳಿಗೆ ಅವಕಾಶ ಮಾಡಿಕೊಡುವುದಾಗಿಶಿವಮಣಿ ಭರವಸೆ ನೀಡಿದರು.
ಅಕಾಡೆಮಿಯ ಪ್ರಥಮತಂಡದ ಹನ್ನೆರಡು ವಿದ್ಯಾರ್ಥಿಗಳು ನಡೆಸಿಕೊಟ್ಟ ಕುವೆಂಪು ವಿರಚಿತಆಷಾಡಭೂತಿಕಿರುನಾಟಕ, ದುರ್ಯೋದನ ಸ್ವಗತ ಮಾತುಗಳು, ಟೊಳ್ಳುಗಟ್ಟಿ ವಿಧುವೆಅಜ್ಜಿ ಮತ್ತುಡ್ಯಾನ್ಸ್ ಪ್ರದರ್ಶನ ಆಹ್ವಾನಿತರಿಗೆ ರಸದೌತಣ ನೀಡಿತು. ಯತಿರಾಜ್ ನಿರೂಪಣೆ, ಅರವಿಂದ್ ಮಾತುಗಳು ಕಾರ್ಯಕ್ರಮಕ್ಕೆ ಮರೆಗುತಂದುಕೊಟ್ಟಿತು. ಎರಡನೆ ಬ್ಯಾಚ್ಇದೇ ತಿಂಗಳಲ್ಲಿ ಶುರುವಾಗಲಿದೆ.
Pingback: Devops Companies
Pingback: Pollocksville Plumbing Giant