ಈ ಶುಕ್ರವಾರ ಅಂದರೆ ಜುಲೈ 13ರಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಉದಯ್ ಮೆಹ್ತಾ ‘ಡಬಲ್ ಇಂಜಿನ್’ ಬಿಡುಗಡೆ ಮಾಡುತ್ತಿದ್ದಾರೆ.
ಹಾಗಂತ ಅವರು ಚಿತ್ರದಿಂದ ಸಂಪೂರ್ಣವಾಗಿ ದೂರ ಉಳಿದಿಲ್ಲ. ಉದಯ್ ಮೆಹ್ತಾ ಚಿತ್ರವನ್ನು ನಿರ್ಮಿಸದಿದ್ದರೂ, ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
ಸುಮನ್ ರಂಗನಾಥ್ ಮತ್ತು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಡಬಲ್ ಇಂಜಿನ್’ ಚಿತ್ರವನ್ನು ಈ ಹಿಂದೆ ‘ಬಾಂಬೆ ಮಿಠಾಯಿ’ ಎಂಬ ಕಾಮಿಡಿ ಚಿತ್ರ ಮಾಡಿದ್ದ ನಿರ್ದೇಶಕ ಚಂದ್ರಮೋಹನ್, ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡಾ ಅವರದ್ದೇ. `’ಬಾಂಬೆ ಮಿಠಾಯಿ’ ಚಿತ್ರದಲ್ಲಿ ಮೂವರು ತುಂಡೈಕ್ಳ ಕಥೆ ಹೇಳಿದ್ದರು ಚಂದ್ರಮೋಹನ್. `’ಡಬಲ್ ಇಂಜಿನ್’ ನಲ್ಲೂ ಅವರು ಮೂವರು ಪಡ್ಡೆ ಹುಡುಗರ ಕಥೆ ಹೇಳುತ್ತಿದ್ದಾರೆ. ಹಳ್ಳಿಯ ಮೂವರು ಹುಡುಗರು ಶ್ರೀಮಂತರಾಗುವುದಕ್ಕೆ ಏನೆಲ್ಲಾ ಶಾರ್ಟ್ಕಟ್ಗಳನ್ನು ಹಿಡಿಯುತ್ತಾರೆ ಎಂಬುದು ಚಿತ್ರದ ಕಥೆಯಂತೆ ಇಲ್ಲಿ ಚಿಕ್ಕಣ್ಣ ಜೊತೆಗೆ ಅಶೋಕ್ ಮತ್ತು ಪ್ರಭು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಸುಮನ್ ರಂಗನಾಥ್ ಮತ್ತು ಪ್ರಿಯಾಂಕಾ ಮಲ್ನಾಡ್ ಅವರಿಗೂ ಇಲ್ಲೊಂದು ಮುಖ್ಯ ಪಾತ್ರವಿದೆ.
Be the first to comment