ಅತೀ ಹೆಚ್ಚು ರೆಸ್ಪಾನ್ಸ್ ಪಡೆದುಕೊಂಡ ‘ಭರಾಟೆ’

ಬಿಡುಗಡೆ ದಿನದಿಂದಲೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು, ಗಳಿಕೆಯಲ್ಲೂ ಉತ್ತಮವಾಗಿದೆ.

ಬಿಡುಗಡೆಯಾದ ದಿನ ಭರಾಟೆ 8 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 5 ದಿನಗಳಲ್ಲಿ ಒಟ್ಟು 25 ಕೋಟಿ ರೂಪಾಯಿಗಳನ್ನು ಬಾಚಿದೆ. ಅಕ್ಟೋಬರ್ 18ರಂದು ತೆರೆಕಂಡ ಚಿತ್ರ ಸಿನಿಪ್ರಿಯರ ಹೃದಯ ಗೆದ್ದಿದೆ.

ಚಿತ್ರದ ಟ್ರೈಲರ್ ಬಿಡುಗಡೆಯಾದಲ್ಲಿಂದಲೇ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ‘ಭರಾಟೆ’ ಇದೀಗ ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಸದ್ದು ಮಾಡಿದೆ. ಮುರಳಿ ಅವರ ಚಿತ್ರಗಳಲ್ಲಿಯೇ ಭರಾಟೆ ಅತೀ ಹೆಚ್ಚು ಗಳಿಸಿದ ಚಿತ್ರವಾಗಿ ದಾಖಲೆ ಬರೆದಿದೆ.

This Article Has 1 Comment
  1. Pingback: Sig Sauer

Leave a Reply

Your email address will not be published. Required fields are marked *

Translate »
error: Content is protected !!